ಜಯಂತ್ ಆರ್. ಹರಿತ್ಸ (ಪೂರ್ಣ ಹೆಸರು :ಜಯಂತ್ ರಾಮಸ್ವಾಮಿ ಹರಿತ್ಸ) ರವರು ಭಾರತೀಯ ಕಂಪ್ಯೂಟರ್ ವಿಜ್ಞಾನಿ ಮತ್ತು ಪ್ರಾಧ್ಯಾಪಕರಾಗಿದ್ದಾರೆ. ಇವರು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ ನಲ್ಲಿ ಸಿಡಿಎಸ್ ಮತ್ತು ಸಿಎಸ್ಎ ಇಲಾಖೆಯ ಸಿಬ್ಬಂದಿಯಾಗಿದ್ದಾರೆ . ಅವರು ಡೇಟಾಬೇಸ್ ಸಿಸ್ಟಮ್ ಗಳ ವಿನ್ಯಾಸ ಮತ್ತು ವಿಶ್ಲೇಷಣೆಯ ಮೇಲೆ ಕಾರ್ಯನಿರ್ವಹಿಸುತ್ತಿದ್ದಾರೆ . ೨೦೦೯ ರಲ್ಲಿ ಭಾರತದಲ್ಲಿ ಸಿಎಸ್ಐಆರ್ ಪ್ರಾಯೋಜಿಸಿದ ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ ಹಾಗೂ ೨೦೧೪ ರಲ್ಲಿ ಇಂಜಿನಿಯರಿಂಗ್ ಗಾಗಿ ಇನ್ಫೋಸಿಸ್ ಪ್ರಶಸ್ತಿ ಗೆದ್ದಿದ್ದಾರೆ. == ಜನನ ಮತ್ತು ಶಿಕ್ಷಣ == ಜಯಂತ್ ಹರಿತ್ಸ ರವರು ೧೦ ಮಾರ್ಚ್ ೧೯೬೪ ರಂದು ಬೆಂಗಳೂರಿನ ಬಸವನಗುಡಿಯಲ್ಲಿ ಜನಿಸಿದರು. ಇವರು ತಮ್ಮ ಪ್ರೌಢ ಶಿಕ್ಷಣವನ್ನು ವಿಜಯ ಪ್ರೌಢ ಶಾಲೆ , ಜಯನಗರ , ಬೆಂಗಳೂರಿನಲ್ಲಿ ಪಡೆದರು ; ನ್ಯಾಷನಲ್ ಕಾಲೇಜು (ಬಸವನಗುಡಿ) ,ಬೆಂಗಳೂರು , ವಿಜ್ಞಾನದಲ್ಲಿ ಪದವಿ ಪೂರ್ವ ಶಿಕ್ಷಣ ; ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ , ಮದ್ರಾಸ್ ನಿಂದ ಬಿ.ಟೆಕ್.(ಎಲೆಕ್ಟ್ರಾನಿಕ್ಸ್ ) ಪದವಿಯನ್ನು ಪಡೆದರು . == ವೃತ್ತಿಜೀವನ == ಅವರು ಮೇರಿಲ್ಯಾಂಡ್ ವಿಶ್ವವಿದ್ಯಾಲಯದ (ಕಾಲೇಜ್ ಪಾರ್ಕ್) ಇನ್ಸ್ಟಿಟ್ಯೂಟ್ ಫಾರ್ ಸಿಸ್ಟಮ್ಸ್ ರಿಸರ್ಚ್‌ ನಲ್ಲಿ ರಿಸರ್ಚ್ ಫೆಲೋ ಆಗಿ ಕಾರ್ಯ ನಿರ್ವಹಿಸಿದರು . ನಂತರ ಅವರು ಭಾರತೀಯ ವಿಜ್ಞಾನ ಸಂಸ್ಥೆಯಲ್ಲಿ ಸಿಎಸ್ಎ ವಿಭಾಗದ ಅಧ್ಯಕ್ಷರಾದರು. == ಪ್ರಶಸ್ತಿಗಳು == ಶಾಂತಿ ಸ್ವರೂಪ್ ಭಟ್ನಗರ್ ಪ್ರಶಸ್ತಿ - ೨೦೦೯ . === ಗೌರವಗಳು === ಅಸೋಸಿಯೇಷನ್ ​​ಫಾರ್ ಕಂಪ್ಯೂಟಿಂಗ್ ಮೆಷಿನರಿ ಯ ಫೆಲೋ - ೨೦೧೫ . ಐಇಇಇ ಯ ಫೆಲೋ - ೨೦೧೩ . ಇಂಡಿಯನ್ ನ್ಯಾಷನಲ್ ಅಕಾಡೆಮಿ ಆಫ್ ಇಂಜಿನಿಯರಿಂಗ್ , ಭಾರತದ ಫೆಲೋ - ೨೦೧೦ . ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸಸ್ , ಭಾರತ - ೨೦೦೬ . == ಉಲ್ಲೇಖಗಳು ==